ಕನ್ನಡಕ್ಕೆ ವಿದೇಶಿ ಲಲನೆಯರ ಜಲಕ್
October 8, 2008
ಕನ್ನಡ ಚಿತ್ರರಂಗದಲ್ಲಿ ಈಗ ವಿದೇಶಿ ಬೆಡಗಿಯರನ್ನು ಹಾಡುಗಳಲ್ಲಿ ಕುಣಿಸುವ ಟ್ರೆಂಡ್ ಹೆಚ್ಚುತ್ತಿದೆ. ಪುನೀತ್, ದರ್ಶನ್.. ಹೀಗೆ ಅನೇಕ ಚಿತ್ರಗಳಲ್ಲಿ ವಿದೇಶಿ ಲಲನೆಯರು ಹೆಚ್ಚಾಗಿ ಹೆಜ್ಜೆ ಹಾಕುತ್ತಾರೆ. ಪುನೀತ್ ಅವರ ಬಿಂದಾಸ್ ಹಾಗೂ ಮೊನ್ನೆ ತಾನೆ ತೆರೆಕಂಡ ವಂಶಿ ಚಿತ್ರದಲ್ಲಿ ವಿದೇಶಿ ನರ್ತಕಿಯರು ಕುಣಿದಿದ್ದರು.
ಗಣೇಶ್ ನಾಯಕನಾಗಿರುವ ಸಂಗಮ ಚಿತ್ರದ ದಿಲ್ ಮಾಂಗೇ ಮೋರ್ ಹಾಡಿನಲ್ಲಿ 20 ಕ್ಕೂ ಹೆಚ್ಚು ವಿದೇಶಿ ನರ್ತಕಿಯರು ಹೆಜ್ಜೆ ಹಾಕಿದ್ದಾರೆ. ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ವಿದೇಶಿಯರನ್ನು ಕರೆಸಿ ಕುಣಿಸಿದ್ದು ಇಂದ್ರಜಿತ್. ಅವರು ತಮ್ಮ ಮೊನಲಿಸಾ ಚಿತ್ರಕ್ಕೆ ದೂರದಿಂದ ರಷ್ಯಾ ನರ್ತಕಿಯರನ್ನು ಕರೆಸಿದ್ದರು.
ವಿದೇಶಿ ನರ್ತಕಿಯರನ್ನು ಬೆಂಗಳೂರಿಗೆ ಕರೆತರುವುದು ಸುಲಭವಲ್ಲ. ಒಂದು ದಿನಕ್ಕೆ 10 ಸಾವಿರ ರೂ. ಸಂಭಾವನೆ ಜೊತೆಗೆ ಇತರ ಖರ್ಚು ಬೇರೆಯೇ ಇರುತ್ತದೆ.
ವಿದೇಶಿ ನರ್ತಕಿಯರನ್ನು ಹೆಜ್ಜೆ ಹಾಕುವುದರಲ್ಲಿ ತುಂಬಾ ಫರ್ಫೆಕ್ಟು. ಆಸಕ್ತಿಯಿಂದ ಡ್ಯಾನ್ಸ್ ತರಬೇತಿ ಮಾಡುತ್ತಾರೆ. ಹೇಗೆ ಬೇಕೋ ಹಾಗೇ ಸೊಂಟ ತಿರುಗಿಸುತ್ತಾರೆ. ಗುಣಮಟ್ಟದಲ್ಲಿ ನಂಬರ್ ಒನ್. ಈವರೆಗೆ ವಿದೇಶಿ ನರ್ತಕಿಯರು ನಟಿಸಿದ ಯಾವುದೇ ಹಾಡು ಫ್ಲಾಪ್ ಆಗಿಲ್ಲ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ನಿರ್ದೇಶಕರೊಬ್ಬರು.
(ಮೂಲ - ವೆಬ್‌ದುನಿಯಾ)




Comments
Got something to say?
You must be logged in to post a comment.