ರಾಕಿ ಕ್ಯಾಸೆಟ್ ಬಿಡುಗಡೆ
October 8, 2008
ಅದು ರಾಕಿ ಚಿತ್ರ ಧ್ವನಿ ಸುರುಳಿ ಬಿಡುಗಡೆ ಸಮಾರಂಭ. ನಿರ್ಮಾಪಕಿ ಪಾರ್ವತಮ್ಮ ಮಾತನಾಡಿ, ನಮ್ಮಲ್ಲಿ ನಿರ್ಮಾಪಕರ ಸಂಖ್ಯೆ ಇನ್ನಷ್ಟು ಹೆಚ್ಚಬೇಕು. ಎಷ್ಟೆಂದರೆ ಯಾವ ಚಿತ್ರಮಂದಿರಗಳವರೂ ಕನ್ನಡ ಸಿನಿಮಾ ಸಿಗುತ್ತಿಲ್ಲ ಎಂದು ಹೇಳಬಾರದು ಎಂದರು.
ತಿಮ್ಮಪ್ಪರಾಜು ಮತ್ತು ನಾರಾಯಣಸ್ವಾಮಿ ನಿರ್ಮಿಸಿ, ನಾಗೇಂದ್ರ ಅರಸ್ ನಿರ್ದೇಶಿಸಿರುವ ‘ರಾಕಿ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ನಿರ್ಮಾಪಕರ ಸಂಘದ ಅಧ್ಯಕ್ಷ ಕೆ.ಸಿ.ಎನ್. ಚಂದ್ರಶೇಖರ್ ಹೇಳುವ ಪ್ರಕಾರ, ರಿಯಲ್ ಎಸ್ಟೇಟ್ ನವರು ಬಂದಿದ್ದರಿಂದ ಚಿತ್ರರಂಗದಲ್ಲಿ ಏರುಪೇರಾಗಿದೆ. ರಾಕಿಯ ನಿರ್ಮಾಪಕರೂ ರಿಯಲ್ ಎಸ್ಟೇಟ್ ನವರೇ ಎಂದರು ಕೆಸಿಎನ್.
ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟ ಪ್ರೇಂ ಹೊಸಬರ ಚಿತ್ರಗಳು ಹಿಟ್ ಆಗಲಿ ಎಂದು ಶುಭ ಹಾರೈಸಿದರು. ಚಿತ್ರದ ನಿರ್ಮಾಪಕ ತಿಮ್ಮರಾಜು ಮಾತನಾಡಿ ಕೆಸಿಎನ್ ಅವರು ನನಗೆ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿದ್ದನ್ನು ಮರೆಯಲು ಸಾಧ್ಯವಿಲ್ಲ ಎಂದರು. ಚಿತ್ರದಲ್ಲಿ ನಾಯಕನಾಗಿ ಮೊಗ್ಗಿನ ಮನಸಸ್ಸಿನ ಯಶ್ ಹಾಗೂ ನಾಯಕಿಯಾಗಿ ಬೀಯಾಂಕಾ ದೇಸಾಯಿ ನಟಿಸಿದ್ದಾರೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ.




Comments
Got something to say?
You must be logged in to post a comment.