Top

ರಾಜ್‌ಗೆ ಹಾಡಿನ ಚಿತ್ರೀಕರಣ

October 3, 2008

ಪ್ರೇಮ್ ನಿರ್ದೇಶನದ ರಾಜ್ ಚಿತ್ರದ ಚಿತ್ರೀಕರಣ ಮಡಿಕೇರಿಯ ಸುಂದರ ವಿಹಂಗನ ತಾಣಗಳಲ್ಲಿ ಹಾಡಿನ ಚಿತ್ರೀಕರಣ ನಡೆಸಲಾಗುತ್ತಿದೆ. ಮೈಸೂರು ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದ್ದು, ಚಿತ್ರತಂಡ ಬೆಂಗಳೂರಿಗೆ ಮರಳಿತ್ತು.

ಪುನೀತ್ ಅವರ ಹಿಂದಿನ ಚಿತ್ರ ಬಾಕ್ಸ್ ಆಫೀಸಿನಲ್ಲಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಬಿ ಮತ್ತು ಸಿ ಸೆಂಟರ್‌ಗಳ ಪ್ರೇಕ್ಷಕರನ್ನು ಮುಟ್ಟಿದಷ್ಟು ನಗರ ಪ್ರದೇಶದ ಜನರನ್ನು ಮುಟ್ಟಲಿಲ್ಲ. ರಾಜ್ ಚಿತ್ರದ ಮೂಲಕ ಪುನೀತ್ ಮತ್ತೆ ಆಪ್ರೇಕ್ಷಕನ್ನತ್ತ ಮರಳುತ್ತಿದ್ದಾರೆ.

ಚಿತ್ರದಲ್ಲಿ ಬಾಲಿವುಡ್ ತಾರೆ ನಿಶಾ ಕೊಠಾರಿ ಮೋಡಿಯೂ ಚಿತ್ರಕ್ಕೆ ಸಹಕಾರವಾಗಬಹುದು ಎನ್ನುವುದು ಗಾಂಧಿನಗರದ ಮತ್ತೊಂದು ಲೆಕ್ಕಾಚಾರ. ಯಶಸ್ವಿ ಗಜ ಚಿತ್ರ ನಿರ್ಮಿಸಿದ ಸುರೇಶ್ ಗೌಡ ಹಾಗೂ ಪಿ.ಎಸ್. ಶ್ರೀನಿವಾಸಮೂರ್ತಿ ರಾಜ್ ಚಿತ್ರ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಹರಿಕೃಷ್ಣ ಸಂಗೀತ ನೀಡಿದ್ದಾರೆ.
(ಮೂಲ - ವೆಬ್‌ದುನಿಯಾ)

Comments

Got something to say?

You must be logged in to post a comment.

Bottom